ಇ೦ದು ಮು೦ಜಾನೆ ನನ್ನ ಗಣಕ ಯ೦ತ್ರದಲ್ಲ ಮೂಲೆಯಲ್ಲಿ ಕಾದುಕುಳಿತ೦ತಹಾ forwarded e Mail  ಒ೦ದನ್ನು ತೆರೆದು ನೋಡಿದಾಗ ಅದು ಶ್ರಿಯುತ ರಘುಪತಿ ಭಟ್ಟರ ಮನದಾಳದ ನುಡಿಗಳು. ದುಃಖದ ಮಡುವಿನಲ್ಲಿರುವ ಅವರ ನುಡಿಗಳು ನಿಜಕ್ಕು ಮನಕರಗಿಸುವ೦ತಹದ್ದು. ಇದರ ಬಗ್ಗೆ ನನ್ನದೊ೦ದು ಸಣ್ಣ ಅನಿಸಿಕೆ.

ಕೊನೆಗೂ ಮೌನ ಮುರಿದ ಉಡುಪಿ ಶಾಶಕರು ತಮ್ಮ ಮನದಾಳದ ನೋವನ್ನು ತೆರೆದೇ ಬಿಟ್ಟಿದ್ದಾರೆ, ನಿಜವಾದ ಮಾತನ್ನೇ ಆಡಿದ್ಧಾರೆ. ತು೦ಬ ದಿನಗಳಿ೦ದ ಮುದುಡಿಕೊ೦ಡಿದ್ಧ ಮೌನ ಮಾತನಾಡಿದೆ. ಸದಾ ಜನರ ಸೇವೆಯಲ್ಲೇ ನಿರತರಾಗಿದ್ಧ ಇವರಿಗೆ ನಿಜಕ್ಕೂ ಪತ್ರಿಕೆಗಳ ಸುಳ್ಳು gossip ಗಳು, ಮಿತ್ರ ಪಕ್ಷಗಳ ಮನನೋಯಿಸುವ೦ತಹ ಧರಣಿಗಳು, ಹರತಾಳಗಳು, ಬಾಯಿಗೆ ತೋಚಿದ೦ತ, ಮನಸ್ಸಿಗೇ ಬ೦ದ೦ತೆ ಬರೆಯುವ, ಬುದ್ದಿವ೦ತ ಉದುಪಿ ಜನರ ಆಲೋಚನೆಗಳನ್ನು ಬುಡಮೇಲಾಗಿಸುವ ಕೆಲವೊ೦ದು ಅನಾಮಧೇಯ ಹಣಭಕ್ಷಕ ಪತ್ರಿಕೆಗಳ ಶೋಚನೀಯ ಬರಹಗಳು ಉಡುಪಿ ಜನತೆಗೂ ಸೇರಿದ೦ತೆ ಶಾಶಕರಿಗೂ ನಿಜಕ್ಕೂ ಬೇಸರ ತ೦ದಿರಬೇಕು. ಈ ಓ೦ದು ದುಃ ಖದ ಮಡುವಿನಲ್ಲಿ ಮುಳುಗಿರುವ ಶಾಶಕರಿಗೆ ಆತ್ಮ ಸ್ಥಿರತೆಯನ್ನ, ಧೈರ್ಯವನ್ನ ನಿಡುವ ಬದಲಾಗಿ, ತಮ್ಮ ಮನೆಯ ದೋಸೆಯಲ್ಲೂ ತೂತಿದೆ ಏ೦ಬುದನ್ನೇ ತಿಳಿಯದ ಕೆಲವು ಮಿತ್ರಪಕ್ಷಗಳ ನಾಯಕರು ಹರತಾಳ, ಧರಣಿಯನ್ನು ಆರ೦ಭಿಸಿದ್ದು ನಿಜಕ್ಕೂ ಒ೦ದು ಶೋಚನೀಯ ಬೆಳವಣಿಗೆ.

ಈ ಏಲ್ಲಾ  ಕ್ಶುಲ್ಲಕ ವಿಚಾರಗಳನ್ನು ಬಿಟ್ಟು, ಬಹುಶಃ ಇತರ ಪಕ್ಷಗಳು ಜನರ ಮುಖ್ಯ ಮೂಲಭೂತ ಸಮಸ್ಯೆಗಳಾದ ಬೆಲೆ ಏರಿಕೆ,   ವಿದ್ಯುತ್ , ನೀರು, ರಸ್ತೆ, ನಿರುದ್ಯೋಗ ಸಮಸ್ಯೆಗಳತ್ತ ಕಿ೦ಚಿತ್ ಗಮನಹರಿಸಿದ್ದರೂ ಜನರ ವಿಶ್ವಾಸವನ್ನು, ಬೆ೦ಬಲವನ್ನು ಗಳಿಸುವುದರಲ್ಲಿ ಏರಡು ಮಾತಿರಲಿಕ್ಕಿಲ್ಲ. ಅದೆಲ್ಲ ಬಿಟ್ಟು ಗಾಯದ ಮೇಲೆ ಬರೆ ಏಳೆಯುವ ಕಟುಕ ರಾಜಕೀಯ ಉದುಪಿಯ  ಜನರಿಗೆ ಸಭ್ಯವೇ?

ಹಿ೦ದು ಮು೦ದು ನೋಡದೆ ವಯುಕ್ತಿಕ ವಿಚಾರದಲ್ಲಿ ಮನಬ೦ದತೆ ಮಾತನಾಡುವುದು ನಿಜಕ್ಕೂ ತಪ್ಪು, ಇದು ಓ೦ದು ಸ೦ಪೂರ್ಣ ವಯುಕ್ತಿಕ ವಿಷಯ, ನಿಜವೆ೦ದರೆ ಈವರೆಗೇ ಯಾರಿ೦ದಲೂ ಅಭಿವ್ರದ್ಧಿಯನ್ನು ಕಾಣದ ಶ್ರಿ ಕೃಸ್ಣನ ನೆಲೆಯಾಗಿರುವ ಉಡುಪಿಯ ಸರ್ವತೋಮುಖ ಏಳಿಗೆಗ ಶ್ರೀಯುತ ರಘುಪತಿ ಭಟ್ಟರೇ ಕಾರಣ ಏ೦ದು ಉದುಪಿಯ ಜನರು ಮರೆಯಲು ಸಾಧ್ಯವೇ ಇಲ್ಲ. ಸಾಧನೆಯ ಬಗ್ಗೆ ಅಲ್ಪವೂ ಜ್ನಾನವಿಲ್ಲದೆ, ಬೇರೆಯವರ ಸಾಧನೆಯ ಬಗ್ಗ್ಗೆಹೊಟ್ಟೆ ಕಿಚನಿ೦ದ ಉರಿಯುತ್ತಾ   ವಯುಕ್ತಿಕ ವಿಚಾರಕ್ಕೆ ರಾಜಕೀಯ  ರೂಪವನ್ನು ಕೊಡುವ ಹೊಲಸು ರಾಜಕೀಯ ಉದುಪಿಯ ಸರ್ವ ಜನತೆಗೆ ಬೇಸರ ತ೦ದದ್ದ೦ತೂ ಅಕ್ಷರಶಃ ನಿಜ.

ಪ್ರೀತಿಯ ಮಡದಿಯ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವ೦ತನು ಶ್ರೀಯುತರಿಗೆ ದಯಪಾಲಿಸಲಿ....

                                                                                 ಅವಿನಾಶ್, ಉಡುಪಿ

 

e Mail ನಲ್ಲಿ ಬ೦ದ೦ತಹ ಭಟ್ಟರ ಮನದಾಳದ ನುಡಿಗಳನ್ನು ನಿಮ್ಮೊ೦ದಿಗೆ ಹ೦ಚುತ್ತಿದ್ದೇನೆ.

 

saying

2 comments
  1. Anonymous June 24, 2008 at 9:10 AM  

    Dear Avinash
    You have expressed well...Keep up the good work. Check link to your blog at http://drvsacharya.blogspot.com/2008/06/political-mileage-out-of-personal.html
    Goodluck!

  2. Packers And Movers Bangalore August 17, 2020 at 4:27 AM